ಕೋಲಾರ: ರಾತ್ರಿ ಬಿದ್ದ ಮಳೆಗೆ ನಗರದಿಂದ ಖಾದ್ರಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್
ಸಂಪೂರ್ಣ ಜಲಾವೃತ
Kolar, Kolar | Oct 10, 2025 ಗುರುವಾರ ರಾತ್ರಿ ಬಿದ್ದ ಮಳೆಗೆ ನಗರದಿಂದ ಖಾದ್ರಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ನಲ್ಲಿ ನೀರು ತುಂಬಿ ಸಾರ್ವಜನಿಕರ ಓಡಾಟಕ್ಕೆ ತ್ರೀವ ತೊಂದರೆ ಉಂಟಾಗಿತ್ತು. ಇದರಿಂದಾಗಿ ಕೆರಳಿದ ಗ್ರಾಮದ ಯುವಕರು ನೀರಿಗೆ ಇಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು. ದಶಕದಿಂದ ಇರುವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಪ್ರತಿಭಟನಾಕಾರರು ಹಾಗೂ ಗ್ರಾಮಸ್ಥರು ಕೊಡಲೇ ರೈಲ್ವೆ ಅಂಡರ್ ಪಾಸ್ ನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳು ಬರುವವರೆಗೂ ನೀರಿನಿಂದ ಹೊರಗಡೆ ಬರದೇ ಪ್ರತಿಭಟನೆ ಮುಂದುವರೆಸುವುದಾಗಿ ಯುವಕರು ಪಟ್ಟು ಹಿಡಿದು ನೀರಿನಲ್ಲಿ ನಿಂತುಕೊಂಡು ಆಕ್ರೋಶ