ಕಾಂಗ್ರೇಸ್ ನಲ್ಲಿ ಖುರ್ಚಿ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಎಂ.ಜಿ ರೋಡ್ ಬಳಿ ಮಾತನಾಡಿದ ನಟಿ ರಮ್ಯಾ ಅವರು, ಇದನ್ನ ನಾನು ಡಿಸೈಡ್ ಮಾಡೋದಲ್ಲ, ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್ ಗಳು ನಿರ್ಧಾರ ಮಾಡ್ತಾರೆ. ಯಾರು ಸಿಎಂ ಆದ್ರು ನನಗೆ ಓಕೆ. ರಾಜ್ಯಕ್ಕೆ ಒಳ್ಳೇಯದಾಗಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ವೇಣುಗೋಪಾಲ್ ಇದ್ದಾರೆ ಅವರೇ ನಿರ್ಧಾರ ಮಾಡ್ತಾರೆ. ಯಾರನ್ನ ಮಾಡಿದ್ರು ಓಕೆ ಎಂದರು.