ಬೆಂಗಳೂರು ಉತ್ತರ: ಜಾತಿ ನಡುವೆ ಸಂಘರ್ಷ ಉಂಟು ಮಾಡಿ ರೊಟ್ಟಿ ಬೇಯಿಸಿಕೊಳ್ಳಲಾಗುತ್ತಿದೆ: ನಗರದಲ್ಲಿ ಬೊಮ್ಮಾಯಿ
ಸಂಸದ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಗಣತಿ ಕಾಯಿದೆ ಇದೆ, ಅದರ ಪ್ರಕಾರ ಕೇಂದ್ರ ಸರ್ಕಾರ ಗಣತಿ ಮಾಡುತ್ತದೆ. ಸರ್ವೆ ಮಾಡಬಹುದು. ಮನೆ ಮನೆಗೆ ಹೋಗುವುದು ಕಾಯಿದೆಯ ವಿರುದ್ದ ಇದೆ. ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಟು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಕಾಂತರಾಜ ವರದಿ ಯಾಕೆ ಮಾಡಿದ್ದರು ಅದನ್ನು ಯಾಕೆ ಜಾರಿ ಮಾಡುತ್ತಿಲ್ಲ ಜನರಿಗೆ ತಿಳಿಸಬೇಕು. ಸಂವಿಧಾನದ ಕಾಲಂನಲ್ಲಿ ಆರು ಧರ್ಮ ಇರೊದು ಅದರಲ್ಲಿ ಇತರರು, ನಾಸ್ತಿಕರು ಅಂತ ಸೇರಿಸಿದ್ದಾರೆ. ನಾಸ್ತಿಕರಿಗೆ ಧರ್ಮ ಇಲ್ಲ. ಕ್ರಿಶ್ಚಿಯನ್ ಭ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಅಂತ ಯಾಕೆ ಕಾಲಂ ಮಾಡಿದ್ದಾರೆ..? ಎಂದು ಪ್ರಶ್ನೆ ಮಾಡಿದರು.