ಬೆಂಗಳೂರು ಉತ್ತರ: ತಂದೆ ಮೇಲಿನ ಪ್ರತಿಕಾರಕ್ಕೆ ಮಾವನನ್ನು ಹತ್ಯೆ ಮಾಡಿದ್ದವರನ್ನು ಬಂಧಿಸಿದ ರಾಮಮೂರ್ತಿನಗರ ಠಾಣೆ ಪೊಲೀಸರು
ವೈಯಕ್ತಿಕ ಕಾರಣಗಳಿಗಾಗಿ 15 ವರ್ಷಗಳ ಹಿಂದೆ ಭಾವನನ್ನೇ ಹತ್ಯೆ ಮಾಡಿದ್ದ ಸೋದರಮಾವನನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಸಂಬಂಧಿ ಹಾಗೂ ಸಹಚರರು ಸೇರಿ ನಾಲ್ವರನ್ನ ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.. ಡಿ.ಜಿ.ಹಳ್ಳಿ ನಿವಾಸಿ ಸಿರಾಜುದ್ದೀನ್ ಹತ್ಯೆಗೈದ ಆರೋಪದಡಿ ಸಂಬಂಧಿ ಫಹಾದ್ ಈತನ ಸಹಚರರಾದ ಸರ್ಫಾದುದ್ದೀನ್, ತೌಶೀದ್ ಹಾಗೂ ಇರ್ಷಾದ್ ಎಂಬುವರನ್ನ ಸೆರೆಹಿಡಿಯಲಾಗಿದೆ.. ಬಂಧಿತರೆಲ್ಲರೂ 20 ವರ್ಷದ ಅಸುಪಾಸಿನ ಯುವಕರಾಗಿದ್ದಾರೆ. ನಿನ್ನೆ ಸಂಜೆ ಟಿನ್ ಫ್ಯಾಕ್ಟರಿ ಬಳಿ ಎರಡು ಬೈಕ್ ನಲ್ಲಿ ಬಂದ ನಾಲ್ವರು ಲಾಂಗ್ ನಿಂದ ಸಿರಾಜುದ್ದೀನ್ ನನ್ನ ಹತ್ಯೆಗೈದಿದ್ದರು.. ಈ ಶಿವಾಜಿನಗರ ಬಳಿ ಇರುವ ತಮ್ಮ ಕಚೇರಿಯಲ್ಲಿ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.