ಕೋಲಾರ: ನಾಗರಿಕರು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಶಯಗಳನ್ನು ಅರಿತುಕೊಳ್ಳಬೇಕು:ನಗರದಲ್ಲಿ ಜಿಲ್ಲಾಧಿಕಾರಿ ಡಾ.ಎಂಆರ್ ರವಿ
Kolar, Kolar | Sep 15, 2025 ನಮ್ಮ ಭಾರತೀಯರಿಗೆ ಸುಲಭವಾಗಿ ಪ್ರಜಾಪ್ರಭುತ್ವ ದೊರಕಿದೆ ಆದುದರಿಂದ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳು ಗೊತ್ತಾಗುತ್ತಿಲ್ಲ ಅನೇಕ ದೇಶಗಳು ತಮ್ಮ ಸ್ವತಂತ್ರಕ್ಕಾಗಿ ರಕ್ತಪಾತಗಳನ್ನು ಅನುಭವಿಸಿದೆ ಆದರೆ ನಮ್ಮ ಭಾರತ ದೇಶದಲ್ಲಿ ಆ ರೀತಿಯಾದಂತಹ ಘಟನೆಗಳು ಆಗಲಿಲ್ಲ ಆದ್ದರಿಂದ ಪ್ರಜಾಪ್ರಭುತ್ವ ಎಂಬುದು ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಉನ್ನತ ಶಿಕ್ಷಣ ಇಲಾಖೆ,ಕಾರ್ಮಿಕ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರ ಅಭಿವೃದ್ಧಿ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಪ್ರಜಾಪ್ರಭುತ್ವ ದಿನಾವರಣೆ ಚಾಲನೆನೀಡಿ ಮಾತನಾಡಿದರು