ಬೆಂಗಳೂರು ಉತ್ತರ: ಆರ್.ಎಸ್.ಎಸ್ ಗೆ ಫ್ರೀ ಬಿಡಕ್ಕೆ ಇದೇನೂ ಛತ್ರ ಅಲ್ಲ: ನಗರದಲ್ಲಿ ಬೇಳೂರು ಗೋಪಾಲಕೃಷ್ಣ
ಆರ್ ಎಸ್ ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಆರ್ ಎಸ್ ಎಸ್ ಸೈಲೆಂಟಾಗಿ ಮಾಡ್ತಾರೆ, ಆರ್ ಎಸ್ ಎಸ್ ನವರಿಂದ ಏನು ಸಮಸ್ಯೆ ಇರಲಿಲ್ಲ. ಈಗ ಬಿಜೆಪಿ ಪುಡಾರಿಗಳು ಸೇರಿದ್ದಾರೆ. ಬಿಜೆಪಿ ಪುಡಾರಿಗಳು ಚಡ್ಡಿ ಹಾಕೋಕೆ ಹೊರಟಿದ್ದಾರೆ. ಇದರಿಂದ RSS ಗೆ ಕೆಟ್ಟ ಹೆಸರು ಬಂದಿದೆ. ಅವರೇ ಬಿಜೆಪಿ ಯವರಿಗೆ ಬೈದಿದ್ದಾರೆ. ಅಲ್ಲಿ ಗೊಂದಲ ಸೃಷ್ಟಿ ಯಾಗಿದೆ ಅಷ್ಟೇ. ಗಣೇಶ್ ಹಬ್ಬ ಕಾರ್ಯಕ್ರಮಕ್ಕೆ ಪರ್ಮಿಷನ್ ಬೇಕು, RSS ಗೆ ಫ್ರೀ ಬೀಡೋಕೆ ಇದೇನು ಛತ್ರನಾ? ಆರ್ ಎಸ್ಎಸ್ ಗೂ ಪರ್ಮಿಷನ್ ಬೇಕು ಎಂದರು.