ಅಂಕೋಲ: ಬೇಲೇಕೇರಿ ಬಂದರಿನಲ್ಲಿ ಮುಳುಗಡೆಯಾದ ಶ್ರೀ ಶಾರದಾಂಬ” ಬೋಟ್
ಅಂಕೋಲಾ : ತಾಲ್ಲೂಕಿನ ಬೇಲೇಕೇರಿ ಬಂದರಿನಲ್ಲಿ ಲಂಗರು ಹಾಕಿದ್ದ “ಶ್ರೀ ಶಾರದಾಂಬ” ಎಂಬ ಮೀನುಗಾರಿಕಾ ಪರ್ಸಿನ್ ಬೋಟ್ ಗುರುವಾರ ಬೆಳಿಗ್ಗೆ ಅಂದಾಜು 9.30 ಗಂಟೆ ಸುಮಾರಿಗೆ ಅಲೆಯ ರಭಸಕ್ಕೆ ಮುಳುಗಿದ ಘಟನೆ ವರದಿಯಾಗಿದೆ. ಸರಸ್ವತಿ ಅಶೋಕ ಬಾನಾವಳಿಕರ ಅವರಿಗೆ ಸೇರಿದ ಈ ಬೋಟ್ ಸಮುದ್ರದಲ್ಲಿ ನೀರು ತುಂಬಿಕೊಂಡು ಸಂಪೂರ್ಣವಾಗಿ ಮುಳುಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಬೋಟ್ನ ಯಂತ್ರೋಪಕರಣಗಳು, ಮೀನುಗಾರಿಕೆ ಬಲೆಗಳು ಮತ್ತು ಇತರ ಸಜ್ಜು-ಸಾಮಾನುಗಳು ಹಾನಿಗೊಳಗೊಂಡಿರುವ ಸಾಧ್ಯತೆ ಇದೆ.