ನಕಲಿ ದಾಖಲೆ ಸೃಷ್ಟಿ ಮಾಡಿರುವ ಆರೋಪ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಚಿವ ಜಮೀರ್ ಅಹ್ಮದ್ ಅವರು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲಾರ ಬಳಿಯೂ ಆಧಾರ್ ಕಾರ್ಡ್ ಇದೆ. ಸಿಎಂ ಸೂಚನೆ ಕೊಟ್ಟಿದ್ದರು, ದಾಖಲೆ ಪರಿಶೀಲನೆ ಮಾಡಿ ಎಂದು. ಯಾರು ಕರ್ನಾಟಕದವರು ಇದ್ದಾರೆ, ಅವರಿಗಷ್ಟೆ ಮನೆ ಕೊಡಲು ತೀರ್ಮಾನ ಮಾಡಿದ್ದೇವೆ. ಬೇರೆಯವರಿಗೆ ಮನೆ ಕೊಡಲ್ಲ ಎಂದರು. ಇನ್ನು ವೇಣುಗೋಪಾಲ ಹಸ್ತಕ್ಷೇಪ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಟಿವಿಯಲ್ಲಿ ಬಂದಿದೆ ನೋಡಿ ಎಂದು ಹೇಳಿದ್ದಾರೆ, ಅದರಲ್ಲಿ ತಪ್ಪೇನು. ನಮ್ಮದೊಂದು ನ್ಯಾಷನಲ್ ಪಾರ್ಟಿ, ಅವರು ನಮ್ಮ ನಾಯಕರು. ಕರ್ನಾಟಕದಲ್ಲಿ ಇಂತದೊಂದು ಸುದ್ದಿ ಆಗುತ್ತಿದೆ ಎಂದು ಸಿಎಂಗೆ ಹೇಳಿದ್ದಾರೆ. ಸಿಎಂ ಸಭೆ ಮಾಡಿದ್ದಾರೆ.