ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ನಗರದ ಗಣಪತಿ ಪೆಂಡಲ್ ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ
Hassan, Hassan | Sep 17, 2025 ಹಾಸನ: ನಗರದ ಸಿಟಿ ಬಸ್ ನಿಲ್ದಾಣ ರಸ್ತೆಯ ಗಣಪತಿ ಪೆಂಡಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬ ಹಿನ್ನಲೆಯಲ್ಲಿ ಮಾಜಿ ಶಾಸಕ ಪ್ರೀತಮ್ ಜೆ. ಗೌಡ ಹಾಗೂ ಮೋದಿ ಅಭಿಮಾನಿಗಳ ಬಳಗದಿಂದ ವಿಶೇಷ ಪೂಜೆ ನೆರವೇರಿಸಲಾಯಿತು.ಈ ವೇಳೆ ಭಕ್ತಾಧಿಗಳಿಗೆ ಗಣ್ಯರಿಂದ ಪ್ರಸಾದವನ್ನು ವಿತರಿಸಲಾಯಿತು. ನಂತರ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಮಾತನಾಡಿ, ಪ್ರತಿ ವರ್ಷ ಪೆಂಡಾಲ್ ಗಣಪತಿಗೆ ನಮ್ಮ ಕುಟುಂಬದಿಂದ ವಿಶೇಷ ಪೂಜೆಯನ್ನು ನೇರವೇರಿಸಲಾಗುತ್ತದೆ. ಇಂದು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಪ್ರಯುಕ್ತ ಪ್ರಧಾನಿ ಅವರ ಆರೋಗ್ಯ ಮತ್ತು ಆಯಾಸ್ಸನ್ನು ಹೆಚ್ಚಿಗೆ