ಕದ್ರಾದ ಯುವತಿ ರಿಶೆಲ್ ಆತ್ಮಹತ್ಯೆಗೆ ಸಂಬಂಧಿಸಿದಂಥೆ ಸೂಕ್ತ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿದ ಮಂಗಳವಾರ ಮಧ್ಯಾಹ್ನ 2ರವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆಯನ್ನು ಕ್ರೈಸ್ತ ಸಮುದಾಯದವರು ಹಾಗೂ ಸಾರ್ವಜನಿರು ನಡೆಸಿದರು. ರಿಶೆಲ್ ಆತ್ಮಹತ್ಯೆಗೆ ಕಾರಣನಾದ ತಪ್ಪಿತಸ್ಥ ಚಿರಾಗ್ ನನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಸ್ಥಳದಲ್ಲಿದ್ದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ದೀಪನ್ ಎಂ.ಎನ್. ಮನವಿ ಸ್ವೀಕರಿಸಿದರು