ಶ್ರೀನಿವಾಸಪುರ: ಮನೆ ಕಳ್ಳತನ ಪ್ರಕರಣದ ಮೂರು ಆರೋಪಿಗಳ ಬಂಧಿಸಿದ ಶ್ರೀನಿವಾಸಪುರ ಪೊಲೀಸರು
ಮನೆ ಕಳ್ಳತನ ಪ್ರಕರಣದ 03 ಆರೋಪಿಗಳ ಬಂಧನ, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣ ಸಂಬಂಧ ಪ್ರೇಮ್ ಕುಮಾರ್, ವಿಜಯ್, ಬಾಬಾ ಎಂಬ ಮೂರುಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಅವರಿಂದ ಸುಮಾರು ₹12,00,000/-ರೂ ಮೌಲ್ಯದ 97.29 ಗ್ರಾಂ ಬಂಗಾರದ ಆಭರಣಗಳು ಹಾಗೂ ಸುಮಾರು ₹50,000/- ಮೌಲ್ಯದ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ