ಜೋಯಿಡಾ : ಧಾರವಾಡ ಕಮಲಾಪುರದ ಶಾಲೆಯಿಂದ ಅಪಹರಣಕ್ಕೊಳಗಾದ ವಿದ್ಯಾರ್ಥಿಗಳಿಬ್ಬರು ಜೋಯಿಡಾದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಸೋಮವಾರ ಸಂಜೆ ಐದೂವರೆ ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಲಭ್ಯವಾಗಿದ್ದು, ಅಪಹರಣ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ ಊಟಕ್ಕೆಂದು ಮಕ್ಕಳನ್ನು ಹೊರಗಡೆ ಬಿಟ್ಟಾಗ ಬೈಕ್ ಸವಾರನೋರ್ವ ಲಕ್ಷ್ಮೀ ಕರಿಯಪ್ಪನವರ ಹಾಗೂ ತನ್ವೀರ್ ದೊಡಮನಿ ಎಂಬ ಮೂರನೇ ತರಗತಿಯ ಮಕ್ಕಳನ್ನು ಪುಸಲಾಯಿಸಿ ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.