ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ನಲ್ಲಿ ನಾಲ್ಕು ಕೆಜಿ ತೂಕದ ಹೈಡ್ರೋ ಗಾಂಜಾ ವಶಕ್ಕೆ
ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್ನಿಂದ ಬುಧವಾರ ತಡರಾತ್ರಿ ಆಗಮಿಸಿದ್ದ ಮಹಿಳೆಯೊಬ್ಬರಬಳಿ 4.ಕೆ.ಜಿ ತೂಕದ ಹೈಡ್ರೋ ಗಾಂಜಾ ಸಿಕ್ಕಿದ್ದು, ಅವರ ವಿರುದ್ಧ ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಬ್ಯಾಂಕಾಕ್ನಿಂದ ಹಾಂಕಾಂಗ್ ಮಾರ್ಗವಾಗಿ ಬಂದ ವಿಮಾನದಲ್ಲಿ ಮಹಿಳೆಯೂ ಹೈಡ್ರೋ ಗಾಂಜಾ ಕಳ್ಳ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿಯ ಆಧಾರದಲ್ಲಿ ವೈಮಾನಿಕ ಗುಪ್ತಚರ ದಳ ಸಿಬ್ಬಂದಿ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ. ಆರೋಪಿಯ ಲೆಗೇಜ್ ಬ್ಯಾಗ್ನ್ನು ತೀವ್ರವಾಗಿ ಪರಿಶೀಲನೆ ಮಾಡಿದಾಗ ಹೈಡ್ರೋ ಗಾಂಜಾವನ್ನು ಕಳ್ಳ ಸಾಗಣೆ ಮಾಡುತ