ಭತ್ತದ ಹುಲ್ಲಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟವಾದ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ವ್ಯಾಪ್ತಿಯ ದೇವಿನಗರ ಕ್ಯಾಂಪಿನಲ್ಲಿ ಡಿಸೆಂಬರ್ 13 ಶನಿವಾರ ಸಂಜೆ 6ಗಂಟೆಗೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಷ್ಟದಲ್ಲಿರುವ ರೈತರಿಗೆ ಸರ್ಕಾರ ನೆರವಾಗಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು. ದೇವಿನಗರ ಕ್ಯಾಂಪಿನ ರೈತರಾದ ವೈ.ಸರ್ವಚಲ, ಕೆ.ಸಾಯಿತೇಜ ತಂದೆ ಸುಧಾಕರ ಎಂಬ ರೈತರು ಖಾಲಿ ಜಾಗದಲ್ಲಿ ದನಕರುಗಳಿಗೆ ಸಂಗ್ರಹಿಸಿದ್ದ ಭತ್ತದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಬಣವೆ ಹೊತ್ತಿ ಉರಿದು ಭಸ್ಮವಾಗಿದ್ದು, ಸುಮಾರು 80 ಸಾವಿರ ರೂಪಾಯಿ ನಷ್ಟವಾ