ಮಳವಳ್ಳಿ : ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ನೂತನ ವಾಗಿ ನಿರ್ಮಾಣವಾಗುತ್ತಿರುವ ಒಕ್ಕಲಿಗರ ಭವನಕ್ಕೆ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರ ಸ್ವಾಮಿ 10 ಲಕ್ಷ ರೂ ಅನುದಾನ ನೀಡಿದ್ದು ಈ ಅನುದಾನದಲ್ಲಿ ಕಟ್ಟಡಕ್ಕೆ ಆರ್ ಸಿ ಸಿ ಹಾಕುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಾ ಕೆ ಅನ್ನದಾನಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು. ಬುಧವಾರ ಸಾಯಂಕಾಲ 5 .30ರ ಸಮಯದಲ್ಲಿ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಮಾಜಿ ಶಾಸಕರು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.