RSS ಚಟುವಟಿಕೆ ಬಗ್ಗೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು, ಕೋರ್ಟ್ ಹೇಳಿದ್ದನ್ನ ನಾವು ಪಾಲನೆ ಮಾಡಬೇಕು. ಆದ್ರೆ ನಾವು ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂದು ಮಾಡಿಲ್ಲ. ಆದ್ರೆ ಯಾವುದೇ ಕಾರ್ಯಕ್ರಮ ಆಗಬೇಕಾದರೆ ಸರ್ಕಾರದ ಅನುಮತಿ ಪಡೀಬೇಕು ಎಂದಿದ್ವಿ. ಆದ್ರೆ ನಾವು ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಎಂದಿದ್ವಾ? ಸಚಿವರು ಪತ್ರ ಬರದಿದ್ದರಲ್ಲಿ ತಪ್ಪಿಲ್ಲ. ಎಲ್ಲಾ ಸಂಸ್ಥೆ- ಸಂಘಗಳಿಗೆ ಅನುಮತಿ ಕೇಳಬೇಕು ಎಂದರು.