ಬೆಂಗಳೂರು ಉತ್ತರ: ಬಿಜೆಪಿ ಜಾತಿ, ಧರ್ಮ ಅನ್ನೋ ವಿಚಾರ ಬಂದ್ರೆ ಫುಲ್ ಆಕ್ಟೀವ್ ಆಗ್ತಾರೆ: ನಗರದಲ್ಲಿ ಸಚಿವ ಸಂತೋಷ್ ಲಾಡ್
ಕೃಷ್ಣಾ ಮೇಲ್ದಂಡೆ ವಿಚಾರವಾಗಿ ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ ಮಾಧ್ಯಮಗಳ ಜೊತೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, ಕೃಷ್ಣಾ ಮೇಲ್ದಂಡೆ ವಿಚಾರವಾಗಿ ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಸಭೆ ಮುಗಿದ ಬಳಿಕ ಈ ಬಗ್ಗೆ ಮಾತಾಡುತ್ತೇನೆ ಎಂದರು ಇನ್ನು ಜಾತಿ ಗಣತಿ ಸಮೀಕ್ಷೆ ಯಲ್ಲಿ ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಎಂಬ ಕಾಲಂ ಗೆ ಬಿಜೆಪಿ ವಿರೋಧ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಜಾತಿ ಧರ್ಮ ಅನ್ನೋ ವಿಚಾರ ಬಂದಾಗ ಮಾತ್ರ ಫುಲ್ ಆಕ್ಟಿವ್ ಆಗ್ತಾರೆ. ಪಾಕಿಸ್ತಾನದ ಜೊತೆ ಮ್ಯಾಚ್ ಆಡುವಾಗ ಇವರು ವಿರೋಧ ಮಾಡಲಿಲ್ಲ. ಆಪರೇಷನ್ ಸಿಂಧೂರ ಅಂದ್ರು, ಪಾಕ್ ಗೆ ನೀರು ಬಿಡುವುದು ನಿಲ್ಲಿಸಿದ್ರು,