ರಸ್ತೆಗಾಗಿ ಠಾಣೆ ಮೆಟ್ಟಿಲರಿದ ಹತ್ತಾರು ಕುಟುಂಬಗಳು ಹತ್ತಾರು ಕುಟುಂಬಗಳ ಸುಮಾರು ೩೦ ೪೦ ವರ್ಷಗಳ ಬೇಡಿಕೆಯಾಗಿದ್ದ ರಸ್ತೆಯ ಕಾಮಗಾರಿ ವಿಚಾರವಾಗಿ ಬುಧವಾರ ವಾದ-ವಿವಾದ ನಡೆದು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ೫ ಗಂಟೆಯಲ್ಲಿ ದೂರು ಸಲ್ಲಿಸಿದ್ದ ಪ್ರಸಂಗ ನಡೆಯಿತು. ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಗ್ರಾಮದ ೨ನೇ ಬಡಾವಣೆಯ ಓಣಿ ಕುಡಿಸಲು ನಿವಾಸಿಗಳು ಸುಮಾರು ವರ್ಷಗಳಿಂದ ಮೂಲ ಭೂತ ಸೌಕರ್ಯಗಳಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇತ್ತೀಚಿಗೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಅವರ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಅಂತಕ್ಕೆ ತಲುಪಿದೆ. ರಸ್ತೆಯನ್ನು ಅಂಕತ