ಶಿಡ್ಲಘಟ್ಟದಲ್ಲಿ ಅಧಿಕಾರಿಗೆ ಜೀವಬೆದರಿಕೆ ವಿಚಾರಕ್ಕೆ ಸಂಬಂಧಿಸಿ ಸಚಿವ ಮುನಿಯಪ್ಪ ಅವರು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಜೀವ್ ಗೌಡ್ರು ಸೌಮ್ಯ ಸ್ವಭಾವದವರು. ಇಂತಹ ಎಮೋಷನ್ ಆಗಬಾರದು. ರಾಜಕೀಯ ವ್ಯಕ್ತಿ ಶಾಂತಿಯುತವಾಗಿರಬೇಕು. ಅಧಿಕಾರಿಗಳಿಗೆ ಹೀಗೆ ಮಾತನಾಡೋದು ಸರಿಯಲ್ಲ. ಏನೇ ವಿಚಾರ ಇದ್ದರೂ ಕೂತು ಮಾತನಾಡಬೇಕು. ಈ ರೀತಿ ಯಾರಿಗೂ ಮಾತನಾಡಬಾರದು ಅನಾಗರಿಕರ ರೀತಿ ಆಗಿಬಿಡುತ್ತದೆ. ಎಲ್ಲದ್ರೂ ಸಿಕ್ಕರೆ ನಾನು ಬುದ್ದಿ ಹೇಳ್ತೀನಿ. ಇದರ ಹಿನ್ನೆಲೆ ನೋಡಿದಾಗ ದಳದ ಪೋಸ್ಟರ್ ತೆಗೆದಿಲ್ಲ ನಮ್ಮ ಪೋಸ್ಟರ್ ಬಂದಾಗ ಮಾತ್ರ ಹೀಗೆ ಮಾಡ್ತಾರೆ ಅನ್ನೋದು ಅವರ ಮಾತು. ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ