ಪಾಲಾರ್ ನದಿಯ ಕೊಡಿ ವೀಕ್ಷಣೆಗೆ ಸಾವಿರಾರು ಮಂದಿ ಬೇತಮಂಗಲ: ಕೋಲಾರ ಜಿಲ್ಲೆಯ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾದ ಬೇತಮಂಗಲ ಪಾಲಾರ್ ನದಿಯು ತುಂಬಿ ಕೋಡಿ ಹರಿಯುತ್ತಿರುವ ಸುಂದರ ದೃಶ್ಯವನ್ನು ನೋಡಲು ವಿವಿಧ ಕಡೆಯಿಂದ ತಂಡೋಪತಂಡವಾಗಿ ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ. ಕೆಜಿಎಫ್ ತಾಲೂಕಿನ ಬೇತಮಂಗಲ ಪಾಲಾರ್ ನದಿಯು ಸಾವಿರಾರು ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯು ಇತ್ತೀಚೆಗೆ ಸುರಿದ ಭಾರಿ ಮಳೆ ಯಿಂದಾಗಿ ತುಂಬಿ ಕೋಡಿ ಹರಿಯುತ್ತಿದ್ದು, ನೋಡಲು ಬರು ಸುಂದರವಾಗಿ ಕಾಣುತ್ತಿರುವುದನ್ನು ನೋಡಿ ಕಣ್ಣು ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಆಗಮಿಸುತ್ತಿದ್ದಾರೆ.