ಶಿವಮೊಗ್ಗ: ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಬೀದಿ ವ್ಯಾಪಾರಿಯ ನಡುವೆ ಗಲಾಟೆ
ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಮತ್ತು ಬೀದಿ ವ್ಯಾಪಾರಿ ಬಸವರಾಜ್ ನಡುವೆ ಸೋಮವಾರ ಗಲಾಟೆ ನಡೆದಿದೆ. ಬೀದಿಯಲ್ಲಿ ತಳ್ಳುಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಬಸವರಾಜ್. ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ರಮೇಶ ಹಾಗೂ ಬಸವರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವ್ಯಾಪಾರಿಯಾ ತಗಡಿನ ಸೇರಿನಿಂದ ಬೀದಿ ವ್ಯಾಪಾರಿ ಬಸವರಾಜ್ ತಲೆಗೆ ಗಾಯವಾಗಿದೆ. ಕೆಲವೇಳೆ ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿತ್ತು. ಸಂಚಾರಿ ಪೊಲೀಸ್ ಬೀದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ್ದಾರೆ. ಘಟನ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.