ಶಿರಾ: ಭದ್ರ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಅ. 6 ರಂದು ತಾವರೆಕೆರೆಯಿಂದ ಶಿರಾ ತಾಲ್ಲೂಕು ಕಚೇರಿವರೆಗೂ ಪಾದಯಾತ್ರೆ
Sira, Tumakuru | Sep 15, 2025 ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕೆರೆಗಳಿಗೆ ಭದ್ರ ಮೇಲ್ದಂಡೆ ಯೋಜನೆಯಡಿ ನೀರು ಹರಿಸುವಂತೆ ಆಗ್ರಹಿಸಿ ಗೌಡಗೆರೆಹೋಬಳಿ ನೀರಾವರಿ ಹಕ್ಕೋತ್ತಾಯ ಸಮಿತಿ ನೇತೃತ್ವದಲ್ಲಿ ತಾವರೆಕೆರೆ ಗ್ರಾಮದಿಂದ ಶಿರಾ ತಾಲ್ಲೂಕು ಕಚೇರಿವರೆಗೂ ಪಾದಯಾತ್ರೆಯು ಅ. 6 ರಂದು ನಡೆಯಲಿದೆ. ಈ ಬಗ್ಗೆ ತಾವರೆಗೆರೆ ಗಣೇಶ ದೇವಾಲಯದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 1.30 ರ ಸಮಯದಲ್ಲಿ ನಡೆದ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.ಸಭೆಯಲ್ಲಿ ರಾಜ್ಯ ಪಶುಪಾಲನೆ ಇಲಾಖೆ ನಿವೃತ್ತ ಉಪ ನಿರ್ದೇಶಕರಾದ ಡಾ. ಗೋ.ಮು.ನಾಗರಾಜು, ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರ್ ಗೌಡ ಇದ್ದರು.