ಉಡುಪಿ: ನಗರದಲ್ಲಿ ವೃದ್ಧನ ರಕ್ಷಣೆ ವಾರಿಸುದಾರರಿಗೆ ಸೂಚನೆ
Udupi, Udupi | Sep 22, 2025 ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ವೃದ್ದರೋರ್ವರು ಅಸಹಾಯಕರಾಗಿ ದುಃಖಿಸುತ್ತಿದ್ದು, ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ. ವೃದ್ದರು ತನ್ನ ಹೆಸರು ಕೃಷ್ಣ ಸುಬ್ರಹ್ಮಣ್ಯ ಮೂಲದವರು ಎಂದು ಹೇಳಿದ್ದು ಹೆಂಡತಿ ಮಕ್ಕಳಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ವೃದ್ದರು ಮರೆವು ಖಾಯಿಲೆ ಇದ್ದ ಹಾಗೆ ಕಾಣುತ್ತಿದ್ದಾರೆ. ಸಂಬಂಧಿಕರು ಯಾರಾದರು ಇದ್ದಲ್ಲಿ ಕೊಳಲಗಿರಿಯ ಸ್ವರ್ಗ ಆಶ್ರಮವನ್ನು ಸಂಪರ್ಕಿಸವಮಬೇಕೆಂದು ವಿಶುಶೆಟ್ಟಿಯವರು ವಿನಂತಿಸಿದ್ದಾರೆ.