ಶ್ರೀನಿವಾಸಪುರ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಶ್ರೀನಿವಾಸಪುರ: ಸಂವಿಧಾನ ಅರ್ಪಣಾ ದಿನಾಚರಣೆಯನ್ನು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಅರ್ಥೈಸುವ ಮೂಲಕ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಬೆಳ್ಳಿಗೆ 10 ಗಂಟೆಯಲ್ಲಿ ಆಚರಿಸಲಾಯಿತು. ಈ ವೇಳೆ ದಲಿತ ಮುಖಂಡ ಗಾಂಡ್ಲಹಳ್ಳಿ ಚಲಪತಿ ಮಾತನಾಡಿ ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದುಕೊಟ್ಟಿರುವಂತಹ ಒಂದು ದಿನ ಇವತ್ತು. 1949 ನವಂಬರ್ 26 ರಂದು ಡಾ ಬಿ ಆರ್ ಅಂಬೇಡ್ಕರ್ ಅಧ್ಯಕ್ಷೆಯಲ್ಲಿ ಸಂವಿಧಾನವನ್ನು ನಾವು ಅಂಗಿಕರಿಸಿದ ದಿನ ಇಂದು.1946ರಲ್ಲಿ ಒಂದು ಸಭೆಯನ್ನು ರಚನೆ ಮಾಡಿ ಸುಮಾರು ಎರಡು ವರ್ಷ ಅನ್ನೊಂದು ತಿಂಗಳು 18 ದಿನಗಳ