ಡಿಜಿಪಿ ರಾಮ ಚಂದ್ರರಾವ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ಹಿನ್ನೆಲೆ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಡಿಜಿಪಿ ರಾಮಚಂದ್ರ ಅವರು ಸದಾಶಿವನಗರದ ಗೃಹ ಸಚಿವ ಪರಮೇಶ್ವರ್ ಅವರ ಮನೆಗೆ ಭೇಟಿ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕಾಲದಲ್ಲಿ ಏನ್ ಬೇಕಾದರೂ ಮಾಡುವ ಸಾಧ್ಯತೆ ಇದೆ, ಎಂಟು ವರ್ಷ ಹಿಂದೆ ನಾನು ಬೆಳಗಾವಿಯಲ್ಲಿ ಇದ್ದೆ. ಇದರ ಬಗ್ಗೆ ನಾನು ಅಡ್ವೊಕೇಟ್ ಜೊತೆ ಮಾತಾಡ್ತೀನಿ. ಇದರ ಬಗ್ಗೆ ತನಿಖೆ ಆಗಬೇಕು. ಗೃಹ ಸಚಿವರಿಗೆ ಮಾಹಿತಿ ನೀಡಲು ಬಂದಿದ್ದೆ, ಎಲ್ಲಾ ಮಾಹಿತಿಯನ್ನ ನೀಡಿದ್ದೇನೆ ಎಂದರು.