ದಾಂಡೇಲಿ: ಅಕ್ರಮವಾಗಿ ಮರಳು ಸಾಗಾಟ, ಬರ್ಚಿಯಲ್ಲಿ ಮಾಲು ಸಹಿತ ಟಿಪ್ಪರ್ ವಶ, ಚಾಲಕ ಸಿಂಗರಗಾವ್ ಗ್ರಾ.ಪಂ ಅಧ್ಯಕ್ಷನ ಬಂಧನ
ಜೋಯಿಡಾ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಮಾಲು ಸಹಿತ ವಶಪಡಿಸಿ, ಚಾಲಕನನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವ ಬಗ್ಗೆ ಮಂಗಳವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಬರ್ಚಿ ಅರಣ್ಯ ವ್ಯಾಪ್ತಿಯಲ್ಲಿ ವೈಜಗಾಂವ್-ಸಿಂಗರಗಾವ್ ಕ್ರಾಸ್ ಮಾರ್ಗವಾಗಿ ದಾಂಡೇಲಿಗೆ ಅಕ್ರಮವಾಗಿ ಮರಳು ಸಾಗಟವಾಗುತ್ತಿರುವ ಖಚಿತ ಮಾಹಿತಿಯಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.