ಆರ್ಎಸ್ಎಸ್ ವಿರುದ್ದ ಹೇಳಿಕೆ ಸಂಬಂಧ ನೋಟೀಸ್ ಜಾರಿ ವಿಚಾರಕ್ಕೆ ಸಂಬಂಧಿಸಿ ಸದಾಶಿವನಗರದಲ್ಲಿ ಬುಧವಾರ ಮಧ್ಯಾಹ್ನ 12:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್ಎಸ್ಎಸ್ನವ್ರ ಬೆದರಿಕೆಗಳಿಗೆ ನಾನು ಹೆದರಲ್ಲ, ಆರ್ಎಸ್ಎಸ್ ಒಂದು ನೋಂದಣಿಯಾಗದ ಸಂಘಟನೆ, ಯಾಕೆ ಇವರು ನೋಂದಣಿ ಮಾಡಿಸುತ್ತಿಲ್ಲ, ಮೋಹನ್ಭಾಗವತ್ಗೆ ಗೃಹ ಸಚಿವರಿಗೆ ಸಮಾನವಾದ ಭದ್ರತೆ ಯಾಕೆ ಎಂದು ಆರ್ಎಸ್ಎಸ್ ವಿರುದ್ದ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.