ಶ್ರೀನಿವಾಸಪುರ: ಜಮೀನು ವಿವಾದ ರಾಯಲ್ಪಾಡು ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಜಾತಿ ನಿಂದನೆ ಹಾಗೂ ದೌರ್ಜನ್ಯ ಆರೋಪ
ಜಮೀನು ವಿವಾದ ರಾಯಲ್ಪಾಡು ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ಜಾತಿ ನಿಂದನೆ ಹಾಗೂ ದೌರ್ಜನ್ಯ ಆರೋಪ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದಲ್ಲಿ ದಲಿತ ಕುಟುಂಬವೊಂದರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ನಡೆಯುತ್ತಿದೆ ಎಂದು ಕುಟುಂಬದ ಮುಖ್ಯಸ್ಥ ಸುಬ್ಬರಾಯಪ್ಪ ಆರೋಪಿಸಿದ್ದಾರೆ. ಸುಮಾರು 35 ವರ್ಷಗಳ ಹಿಂದೆ ಕೊಂಡುಕೊಂಡ ಜಮೀನಿನಲ್ಲಿ ತಮ್ಮನ್ನು ಬದುಕಲು ಬಿಡದೆ ಕೆಲವು ಪ್ರಭಾವಿ ವ್ಯಕ್ತಿಗಳು ತೊಂದರೆ ಕೊಡುತ್ತಿದ್ದಾರೆಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಸುಬ್ಬರಾಯಪ್ಪ ಅವರ ಪ್ರಕಾರ, ಸುಮಾರು 35 ವರ್ಷಗಳ ಹಿಂದೆ ಅವರು ವೆಂಕಟಮ್ಮ ಎಂಬುವವರಿಂದ ರಾಯಲ್ಪಾಡ