ಅಂಕೋಲ: ಅನಾರೋಗ್ಯ ಪೀಡಿತರಾದ ಬಿಜೆಪಿ ಪ್ರಮುಖ ಕೃಷ್ಣ ಬಾನಾವಳಿಕರ್ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್
ಅಂಕೋಲಾ ತಾಲೂಕಿನ ಬೇಲೇಕೇರಿ ಗ್ರಾಮದ ಬಿಜೆಪಿ ಪ್ರಮುಖ ಕೃಷ್ಣ ಬಾನಾವಳಿಕರ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರವಿವಾರ ಸಂಜೆ 5ರ ಸುಮಾರು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಕೃಷ್ಣ ಅವರ ಮನೆಗೆ ತೆರಳಿ ಆರೋಗ್ಯದ ಬಗ್ಗೆ ವಿಚಾರಿಸಿದರು. ಈ ವೇಳೆ ಅಂಕೋಲಾ ಮಂಡಲದ ಮಾಜಿ ಅಧ್ಯಕ್ಷರಾದ ಸಂಜಯ್ ನಾಯ್ಕ, ಕಾರ್ಯದರ್ಶಿಗಳಾದ ಶ್ರೀಧರ ನಾಯ್ಕ, ಚಂದ್ರಕಾಂತ್ ನಾಯ್ಕ, ಪ್ರಮುಖರಾದ ರಾಮಾ ಬಾನಾವಳಿ, ಸುಮಿತ್ ಬಾನಾವಳಿ, ನಾಗರಾಜ ನಾಯ್ಕ, ಯುವನಾಯಕ ಪರ್ಬತ್ ನಾಯ್ಕ, ಹಾಗೂ ಸವಿತಾ ಬಾನಾವಳಿ ಇನ್ನಿತರರು ಉಪಸ್ಥಿತರಿದ್ದರು.