ಸಚಿವ ಎಚ್ ಸಿ ಮಹದೇವಪ್ಪ ಅವರು ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಡಿಕೆ ಶಿವಕುಮಾರ್ ಡೆಡ್ ಲೈನ್ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆ ಮಾತನಾಡಿ, ದೊಡ್ಡ ದೊಡ್ಡವರ ವಿಷಯ ನನಗೇನು ಗೊತ್ತಾಗುತ್ತೆ ಸರ್? ಡೆಡ್ ಲೈನ್ ಕೊಟ್ಟಿದ್ದು ನನಗೆ ಹೆಂಗೆ ಗೊತ್ತಾಗುತ್ತೆ? ಚೀಫ್ ಮಿನಿಸ್ಟರ್, ಅಧ್ಯಕ್ಷರು ಹೈಕಮಾಂಡ್ಗೆ ಗೊತ್ತಿರುವ ವಿಷಯ ಅದು ಎಂದರು. ಇನ್ನು ದಲಿತ ಸಿಎಂ ಹೋರಾಟ ನಿರಂತರವಾಗಿರುತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಂಬೇಡ್ಕರ್ ಅವರ ಹೋರಾಟ ನೋಡಿದ ಮೇಲೆ ಅದು ನಿರಂತರವಾಗಿ ಇದ್ದೇ ಇದೆ ಅಲ್ವಾ. ಶೋಷಿತ ವರ್ಗಗಳಿಗೆ ಶಕ್ತಿ ತುಂಬಬೇಕು ಎಂಬುದೇ ಅಂಬೇಡ್ಕರ್ ಅವರ ಹೋರಾಟ, ಸಿದ್ದಾಂತ, ನೂರು ವರ್ಷಗಳ ಹಿಂದಿನಿಂದಲೇ ಈ ಹೋರಾಟ ಇದೆ.