ಮದ್ದೂರು: ದೊಡ್ಡರಸಿನಕೆರೆ ಗ್ರಾಮದಲ್ಲಿ ಸೆ.15 ರಂದು ಗಣೇಶ ವಿಸರ್ಜನೆ, 2 ಸಾವಿರ ಮಂದಿಗೆ ಅನ್ನಸಂತರ್ಪಣೆ ಕಾರ್ಯಕ್ರಮ
Maddur, Mandya | Sep 14, 2025 ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಸೆ.15 ರಂದು ಗಣೇಶ ವಿಸರ್ಜನೆ ಅಂಗವಾಗಿ 2 ಸಾವಿರ ಮಂದಿಗೆ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ದೊಡ್ಡರಸಿನಕೆರೆ ಗ್ರಾಮದ ಮಹದೇಶ್ವರ ದೇವಾಲಯದ ಆವರಣದಲ್ಲಿ ಕಳೆದ 25 ವರ್ಷಗಳಿಂದ ಗಣೇಶ ಮೂರ್ತಿಯನ್ನು ಗಣೇಶ ಹಬ್ಬದಂದು ಪ್ರತಿಷ್ಠಾಪಿ ಪೂಜೆಸಲ್ಲಿಸಲಾಗುತ್ತಿದ್ದು, ಇದನ್ನು ಸೋಮವಾರ ಸಂಜೆ 6 ಗಂಟೆಯ ನಂತರ ವಿಸರ್ಜನೆ ಮಾಡಲು ಶ್ರೀಮಹದೇಶ್ವರ ಗೆಳೆಯರ ಬಳಗ ಹಾಗೂ ಕಾಲಭೈರವೇಶ್ವರ ಸ್ವಸಹಾಯ ಬಳಗದ ಸದಸ್ಯರು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ 2 ಸಾವಿರ ಭಕ್ತಾಧಿಗಳಿಗೆ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರದೀಪ್ ಅವರು ತಿಳಿಸಿದ್ದಾರೆ.