ಸಾಗರ: ಸಾಗರ ಪ್ರತ್ಯೇಕ ಜಿಲ್ಲೆಗಾಗಿ ನ.6ರಿಂದ ಧರಣಿ ಸತ್ಯಾಗ್ರಹ: ಸಾಗರದಲ್ಲಿ ಸಾಮಾಜಿಕ ಹೋರಾಟಗಾರ ತೀ.ನಾ.ಶ್ರೀನಿವಾಸ್
Sagar, Shimoga | Nov 3, 2025 ಕೇಂದ್ರ ಸರ್ಕಾರ ಈ ವರ್ಷದ ಡಿಸೆಂಬರ್ ಒಳಗಾಗಿ ಯಾವುದೇ ಜಿಲ್ಲೆ ತಾಲೂಕುಗಳನ್ನ ಮಾಡಲು ಸೂಚನೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿದೆ.ಬಳಿಕ ಜನಗಣತಿ ಪ್ರಾರಂಭ ಕುರಿತು ಕೇಂದ್ರ ತಿಳಿಸಿರುವ ಹಿನ್ನೆಲೆ ಈ ನಿಟ್ಟಿನಲ್ಲಿ ಸೆ.5 ರಂದು ಸಭೆ ಕರೆದು ಎಲ್ಲಾ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ರಾಜ್ಯ ಸರ್ಕಾರಕ್ಕೆ ಸಾಗರ ತಾಲೂಕನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಮನವಿಯನ್ನ ಸಲ್ಲಿಸಿದ್ದೆವು. ಆದರೆ ಎರಡು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಈ ನಿಟ್ಟಿನಲ್ಲಿ ನ.6ರಿಂದ ಸಾಗರದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಸಾಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ತೀ.ನಾ.ಶ್ರೀನಿವಾಸ್ ತಿಳಿಸಿದರು.