ಸರ್ಕಾರದ ಆರ್ಎಸ್ಎಸ್ ನಿರ್ಭಂಧ ವಿಧಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಮಾರ ಕೃಪ ಅತಿಥಿ ಗೃಹದ ಬಳಿ ಮಾಧ್ಯಮಗಳ ಜೊತೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಹೈಕೋರ್ಟ್ ಆದೇಶದ ಮೇಲೆ ನಾವು ಮೇಲ್ಮನವಿ ಹೋಗುತ್ತೇವೆ. ನಾವು ಅನುಮತಿ ಕೊಡಲ್ಲ ಅಂತಿಲ್ಲ, ಅನುಮತಿ ಪಡೆಯಿರಿ ಅಂತಿದ್ದೀವಿ. ಇಲ್ಲಿ ತನಕ ಆರ್ ಎಸ್ ಎಸ್ ಏನೇನು ಬೈದಿದ್ದಾರೆ ಗೊತ್ತಿದೆ. ಬಿಜೆಪಿ ಲೀಡರ್ ಗಳು ಏನೇನು ಬೈತಿದ್ದಾರೆ ವೈಯಕ್ತಿಕ ವಿಚಾರಕ್ಕೆ ನೀವೆ ನೋಡಿ. ಇಷ್ಟೆಲ್ಲ ಆದಮೇಲೂ ಆರ್ ಎಸ್ ಎಸ್ ನವರು ಖಂಡಿಸಿದ್ದರಾ? ಬಿಜೆಪಿ ಚಿತ್ತಾಪುರ ಅಭ್ಯರ್ಥಿ ಮಾತಾಡಿದ್ದಕ್ಕೆ ಖಂಡಿಸಿದರಾ? ಇಷ್ಟಾದ ಮೇಲೂ ಈಗಲೇ ಆಗಬೇಕು ಆಗಲೇ ಆಗಬೇಕು ಅಂದರೆ ನಮ್ಮ ಜನರು ಸುಮ್ಮನೆ ಇರ್ತಾರಾ?