ಕನಕಗಿರಿ: ಪರಿಶಿಷ್ಟ ಜಾತಿಯ ಜನರು ಶೇಕಡಾ 70 ರಷ್ಟು ಇರುವ ತಾಲ್ಲೂಕಿನ 11 ಗ್ರಾಮಗಳ ಆದಿ ಕರ್ಮಯೋಗಿ ಯೋಜನೆಯ ಮಾಸ್ಟರ್ ಟ್ರೇನರ್ ಗೆ ತರಬೇತಿ
ಪರಿಶಿಷ್ಟ ಜಾತಿಯ ಜನರು ಶೇಕಡಾ 70 ರಷ್ಟು ಇರುವ ಕನಕಗಿರಿ ತಾಲ್ಲೂಕಿನ 11 ಗ್ರಾಮಗಳ ಕೇಂದ್ರ ಸರ್ಕಾರದ ಆದಿ ಕರ್ಮಯೋಗಿ ಯೋಜನೆಯಲ್ಲಿ ಗ್ರಾಮದ ಪರಿಶಿಷ್ಟ ಜಾತಿ ಜನರನ್ನು ಮುಖ್ಯ ವಾಹಿನಿ ಗೆ ತರಲು ಕನಕಗಿರಿ ಹಾಗೂ ಗಂಗಾವತಿ ತಾಲ್ಲೂಕಾ ಸಮಾಜ ಕಲ್ಯಾಣ ಇಲಾಖೆಯಿಂದ ಆದಿ ಕರ್ಮಯೋಗಿ ಅಭಿಯಾನದಲ್ಲಿ ಆಯ್ಕೆಯಾದ ಗ್ರಾಮಗಳ ಮಾಸ್ಟರ್ ಟ್ರೇನರ್ ಗಳಿಗೆ ಮೂರು ದಿನದ ತರಬೇತಿ ಕಾರ್ಯಕ್ರಮ ಕನಕಗಿರಿ ತಾಲ್ಲೂಕಾ ಪಂಚಾಯತಿ ಸಭಾಗಂಣದಲ್ಲಿ ಇಂದು ನಡೆಯಿತು. ,ಸೆಪ್ಟೆಂಬರ್18 ರಂದು ಮಧ್ಯಾಹ್ನ 1-00 ಗಂಟೆಗೆ ಗಂಗಾವತಿ ತಾಲ್ಲೂಕಾ ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ಗ್ಯಾನನಗೌಡ ಅವರ ನೇತೃತ್ವದಲ್ಲಿ ಸಸಿಗೆ ನೀರುಹಾಕುವ ಮೂಲಕ ಚಾಲನೆ ನೀಡಿದರು.