ಕೊಳ್ಳೇಗಾಲ: ಹೆಚ್.ಕೆ. ಮೆಮೋರಿಯಲ್ ಟ್ರಸ್ಟ್, ರೋಟರಿ ಮಿಡ್ ಟೌನ್, ರೋಟರಿ ಲಯನ್ಸ್ ಕ್ಲಬ್ ಹಾಗೂ ಕನ್ನಡ ಜೀ ವಾಹಿನಿ ಇವರ ಸಹಯೋಗದಲ್ಲಿ ಡಿಸೆಂಬರ್ 19 ಮತ್ತು 20ರಂದು ಕೊಳ್ಳೇಗಾಲದಲ್ಲಿ ಎರಡು ದಿನಗಳ ‘ನಮ್ಮೂರ ಕನ್ನಡ ಹಬ್ಬ’ ಹಾಗೂ ‘ಪೋಲೀಸರಿಗೆ ನಮನ’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೆಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೇಮಲತಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.ಕಳೆದ ವರ್ಷ ಜೀ ಕನ್ನಡ ಸಹಯೋಗದಲ್ಲಿ ನಡೆದ ಅರ್ಜುನ್ ಜನ್ಯ ಅವರ ಸಂಗೀತ ಮನೋರಂಜನಾ ಕಾರ್ಯಕ್ರಮಕ್ಕೆ ಅಪಾರ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ, ಈ ವರ್ಷವೂ ಅದೇ ಅದ್ಧೂರಿಯಲ್ಲಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಜನತೆಗೆ ಉತ್ತಮ ಮನೋರಂಜನೆ ನೀಡುವದು ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು