ಹೆಬ್ರಿ: ಹೆಬ್ರಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೌಡಿಶೀಟರ್ಗಳ ಬಂಧನ
Hebri, Udupi | Jul 22, 2025 ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ 38ನೇ ಕಳ್ತೂರು ಗ್ರಾಮದ ಸಂತೆಕಟ್ಟೆಯಲ್ಲಿರುವ ಸಿರಿಮುಡಿ ಹೋಟೆಲ್ ನಲ್ಲಿ ದಿನಾಂಕ 20 ರಂದು ಮಧ್ಯಾಹ್ನ ಎರಡು 15ರ ಸುಮಾರಿಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ರೌಡಿಶೀಟರ್ಗಳಾದ ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ, ಸಂತೋಷ್ ನಾಯಕ್ ಎಂಬುವರೊಂದಿಗೆ ಸೇರಿಕೊಂಡು ಇನ್ನೋರ್ವ ರೌಡಿ ಹಳೆ ಅಸಾಮಿ ರಾಜ @ ರಾಜೇಶ್ ನಾಯಕ್ ನಾಯ್ಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.