ಮಳವಳ್ಳಿ: ಮಳವಳ್ಳಿಗೆ ರಾಷ್ಟ್ರಪತಿಗಳ ಆಗಮನ ಹಿನ್ನೆಲೆ, ಪಟ್ಟಣಕ್ಕೆ ಆಗಮಿಸಿದ ಸೇನಾ ಹೆಲಿಕಾಪ್ಟರ್ ಗಳಿಂದ ಆಗಮನ ನಿರ್ಗಮನದ ತಾಲೀಮು
ಮಳವಳ್ಳಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಳವಳ್ಳಿ ಗೆ ಆಗಮಿತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಭಾರತೀಯ ವಾಯು ಸೇನೆಯ ಹೆಲೆಕ್ಯಾಪ್ಟರ್ ಗಳು ಹೆಲಿಪ್ಯಾಡ್ ನಲ್ಲಿ ಬಂದಿಳಿದು ತಾಲೀಮು ನಡೆಸಿದವು. ಪಟ್ಟಣದಲ್ಲಿ ಜರುಗಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ 1066ನೇ ಜಯಂತೋತ್ಸವದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 16 ರಂದು ಮಧ್ಯಾಹ್ನ 3.15ಕ್ಕೆ ಮಳವಳ್ಳಿಗೆ ಆಗಮಿಸುತ್ತಿದ್ದು ಇದಕ್ಕಾಗಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿ ಹೆಲಿಪ್ಯಾಡ್ ಸಿದ್ದ ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಭಾರತೀಯ ವಾಯು ಸೇನೆಯ ಮೂರು ಹೆಲಿಕಾಪ್ಟರ್ ಗಳು ತಾಲೀಮು ನಡೆಸಿದವು.