ಬೆಂಗಳೂರು ಉತ್ತರ: ಕುಮಾರಸ್ವಾಮಿ ಅವರೇ ನಾನು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಲೂಟಿ ಮಾಡಿದ್ದೇನೆ: ನಗರದಲ್ಲಿ ಶಾಸಕ ರಂಗನಾಥ್ ತಿರುಗೇಟು
"ಕುಮಾರಸ್ವಾಮಿ ಅವರೇ, ನಾನು ಕುಣಿಗಲ್ ಜನತೆಯ ಪ್ರೀತಿ ಮತ್ತು ವಿಶ್ವಾಸವನ್ನು ಲೂಟಿ ಮಾಡಿದ್ದೇನೆ. ನೀವು ಹೇಳುವ ಅರ್ಥದ 'ಲೂಟಿ'ಯನ್ನು ನಾನು ಎಂದಿಗೂ ಮಾಡಿಲ್ಲ" ಎಂದು ಕುಣಿಗಲ್ ಶಾಸಕರಾದ ಹೆಚ್.ಡಿ. ರಂಗನಾಥ್ ಅವರು ತಿರುಗೇಟು ನೀಡಿದರು. ಬೆಂಗಳೂರಿನ ಬಸವೇಶ್ವರ ನಗರದ ಶಾಸಕರ ನಿವಾಸದಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಹಿರಿಯರಾದ ನಿಮ್ಮ ಮಾತು ಮತ್ತು ನಡವಳಿಕೆಗಳನ್ನು ನೋಡಿ ನಾವು ಅನುಸರಿಸಬೇಕು. ಆದರೆ ನೀವು ಇದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೀರಿ. ಈ ರೀತಿ ಪದ ಬಳಕೆ ಮಾಡುವುದನ್ನು ನಿಲ್ಲಿಸಿ. ನಮ್ಮಂತಹ ಯುವ ಶಾಸಕರ ತೇಜೋವಧೆ ಕೆಲಸ ಮಾಡಬೇಡಿ. ನಾನು ಲೂಟಿ ಮಾಡಿದ್ದರೆ ಇದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ" ಎಂದು ಸವಾಲು ಹಾಕಿದರು.