ಬೆಂಗಳೂರು ಉತ್ತರ: ಈ ಸರ್ಕಾರಕ್ಕೆ ಗುರಿ, ಸಂಕಲ್ಪ, ಬದ್ದತೆ ಯಾವುದು ಇಲ್ಲ: ನಗರದಲ್ಲಿ ಕೆ.ಸುಧಾಕರ್
ಎತ್ತಿನ ಹೊಳೆ ಯೋಜನೆ ವಿಳಂಬ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಾಲರ್ಸ್ ಕಾಲೋನಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಟಿದ ಸಂಸದ ಡಾ.ಕೆ ಸುಧಾಕರ್ ಅವರು, ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇವರಿಗೆ ಗೊತ್ತು, ಗುರಿ ಸಂಕಲ್ಪ ಅನ್ನೋದಿಲ್ಲ, ಬದ್ದತೆ ಇಲ್ಲ. ಬಯಲು ಸೀಮೆಗೆ ನೀರು ಕೊಡಿ ಅಂದರೆ ಕೊಳಚೆ ನೀರು ಕೊಡೋದೇ ದೊಡ್ಡ ಸಾಧನೆ ಆಗಿದೆ. ದೇಶದಲ್ಲಿ ಯಾರಾದರೂ ಕೊಳಚೆ ನೀರು ಸೇವನೆ ಮಾಡ್ತಿದ್ದಾರಾ.? ಬೆಂಗಳೂರಿನ ಜನತೆ ಸೇವನೆ ಮಾಡುವ ತರಕಾರಿ ಹಣ್ಣು ಕೂಡ ಈ ಕೊಳಚೆ ನೀರಿಂದ ಬೆಳೆದಿರೋದು. ಕೊಳಚೆ ನೀರು ಶುದ್ಧೀಕರಣ ಮಾಡಿ ಬಿಡುವ ನೀರಿಂದ ಬೆಳೆಯುತ್ತಿರೋದು ತರಕಾರಿ. ಇದರಿಂದ ಬಹಳಷ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ,