ಭದ್ರಾವತಿ: ಪ್ಯಾಲೆಸ್ತೀನ್ ಧ್ವಜ ಪ್ರದರ್ಶನದ ವಿಡಿಯೋ ವೈರಲ್: ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಭದ್ರಾವತಿಯಲ್ಲಿ ಸೆಪ್ಟೆಂಬರ್ 8ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ಅನ್ಯಧರ್ಮದ ಯುವಕರು ಪ್ಯಾಲೆಸ್ತೀನ್ ಧ್ವಜವನ್ನ ಪ್ರದರ್ಶನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಈ ಕುರಿತಾಗಿ ಸಾಮಾಜಿಕ ಕಾರ್ಯಕರ್ತ ದೇವರಾಜ್ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದಾದ ಬಳಿಕ ಬಿಎನ್ಎಸ್ ಕಾಯ್ದೆ ಅಡಿ ಪ್ಯಾಲೆಸ್ತೀನ್ ಧ್ವಜವನ್ನ ಹಿಡಿದು ಸಾಗಿರುವವರ ವಿರುದ್ಧ ಪ್ರಕರಣ ದಾಖಲಾಗಿದೆ ಈ ಕುರಿತಾದ ಮಾಹಿತಿ ಸೋಮವಾರ ಲಭ್ಯವಾಗಿದೆ.