ಹಾಸನ: ನಗರದಲ್ಲಿ ಸೆ.28 ರಂದು ಹೊಯ್ಸಳೋತ್ಸವ:: ನಗರದಲ್ಲಿ ನವ ಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಕೆನಾಲಿಗೌಡ ಮಾಹಿತಿ
Hassan, Hassan | Sep 25, 2025 ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೆಪ್ಟೆಂಬರ್ 28 ರಂದು ನವಕರ್ನಾಟಕ ಯುವಶಕ್ತಿ ಸಂಘಟನೆಯ 18ನೇ ವರ್ಷದ ಯುವಶಕ್ತಿ ಸಮಾವೇಶದ ಅಂಗವಾಗಿ ಹೊಯ್ಸಳ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಕೆನಾಲಿ ಗೌಡ ತಿಳಿಸಿದರು.ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, 2007 ರಲ್ಲಿ ಆರಂಭವಾದ ಈ ಸಂಘಟನೆ ಅಲ್ಲಿಂದ ಇಲ್ಲಿಯವರೆಗೆ ಕನ್ನಡ ದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡ ಕಂಪು ಸೂಸುವ ನಿಟ್ಟಿನಲ್ಲಿ ಅನೇಕ ಹೋರಾಟಗಳನ್ನು ನಮ್ಮ ಸಂಘಟನೆ ಕೆಲಸ ಮಾಡಿದೆ ಎಂದರು.