ಸಕಲೇಶಪುರ: ಹಾಡ್ಲಹಳ್ಳಿ ಗ್ರಾಮದಲ್ಲಿ ಗಜ ಪಡೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶ
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಗಜಪಡೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸಕಲೇಶಪುರ ತಾಲ್ಲೂಕಿನ, ಹಾಡ್ಲಹಳ್ಳಿ, ಮೆಕ್ಕಿನಮನೆ ಗ್ರಾಮಗಳಲ್ಲಿ ಗಜಪಡೆ ದಾಂಧಲೆಗೆ ಕಾಫಿ, ಅಡಕೆ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ದೊರೆಸ್ವಾಮಿ, ಗುರುಶಾಂತೇಗೌಡ ಎಂಬುವವರಿಗೆ ಸೇರಿದ ಕಾಫಿ ತೋಟ ಆನೆ ದಾಂಧಲೆಯಿಂದ ಹಾಳಾಗಿದೆ.ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಕಾಫಿ, ಅಡಕೆ, ಮೆಣಸಿನ ಗಿಡ ಗಳನ್ನು ಕಳೆದುಕೊಂಡು ಬೆಳೆಗಾರರು ಕಂಗಾಲಾಗಿದ್ದಾರೆ.