ಕಂಪ್ಲಿ: ಇಟಗಿ ಗ್ರಾಮದಲ್ಲಿ ಸುರಿದ ಭಾರಿ ಮಳೆ, ಹಳ್ಳದಂತಾದ ರಸ್ತೆಗಳು, ಕೆಲ ಮನೆಗಳಿಗೆ ನುಗ್ಗಿದ ನೀರು
Kampli, Ballari | Sep 14, 2025 ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಗ್ರಾಮದಲ್ಲಿ ಇಂದು ಸುರಿದ ಭಾರಿ ಮಳೆಯಿಂದಾಗಿ ಗ್ರಾಮಸ್ಥರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಮ್ಮ ಭಗವಾನ್ ಓಣಿಯ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. ಹಲವೆಡೆ ಮನೆ ಸಾಮಾನುಗಳು ಹಾನಿಗೊಳಗಾಗಿದ್ದು, ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. ಸೆಪ್ಟಂಬರ್ 14, ಭಾನುವಾರ ಸಂಜೆ 4 ಗಂಟೆಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಶಾಶ್ವತ ಪರಿಹಾರ ಕೈಗೊಳ್ಳದ ಕಾರಣ ಇದೀಗ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.