ಮುಧೋಳ: ಶಿಬರೂರು ಆರ್.ಸಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಬಂದಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣಾ ವ್ತಾಪ್ತಿಯ ಶಿಬರೂರು ಆರ್.ಸಿ ಬಳಿ ಜರುಗಿದೆ.ಸೆಪ್ಟೆಂಬರ್ 14.ರ ಸಂಜೆ ಆರು ಗಂಟೆ ಸಂದರ್ಭ. ಬಂಧಿತ ವ್ಯಕ್ತಿಯನ್ನ ಲಕ್ಷ್ಮಣ ಜೋಗಿ (55) ಎಂದು ಗುರ್ತಿಸಲಾಗಿದೆ.ಶಿಬರೂರು ಆರ್.ಸಿ ಬಳಿಯ ರಸ್ತೆ ಪಕ್ಕದಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಮುಧೋಳ ಪೊಲೀಸರು ದಾಳಿ ನಡೆಸಿ ಅಂದಾಜು ಮೂರು ಸಾವಿರ ರೂಪಾಯಿ ಮೌಲ್ಯ್ ಗಾಂಜಾ ವಶಪಡಿಸಿಕೊಂಡು,ವ್ಯಕ್ತಿಯನ್ನ ಬಂಧಿಸಿದ್ದಾರೆ.ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.