ಬೀಳಗಿ: ಶಾಸಕ ಜೆ.ಟಿ.ಪಾಟೀಲ್ ಅವರು ಬೆಂಬಲಿಗರ ವಿರುದ್ಧ ಮಣ್ಣು ಮಾರಾಟ ಮಾಡಿದ್ದಾರೆಂದು ಆರೋಪ,ಪಟ್ಟಣದಲ್ಲಿ ಹುಚ್ಚಪ್ಪಯ್ಯನಮಠದ ಸ್ವಾಮೀಜಿ ಆಕ್ರೋಶ
Bilgi, Bagalkot | Oct 14, 2025 ಬೀಳಗಿಯ ಹುಚ್ಚಪ್ಪಯ್ಯನ ಮಠಕ್ಕೆ ರಸ್ತೆ ಮಾಡುವ ನೆಪದಲ್ಲಿ ಗುಡ್ಡ ಅಗೆದು ಗರಸ್ ಮಾಡಿಕೊಂಡಿದ್ದಾರೆ ಎಂದು ಶಾಸಕ ಜೆ ಟಿ ಪಾಟೀಲ್ ಬೆಂಬಲಿಗರ ವಿರುದ್ಧ ಬೀಳಗಿ ಹುಚ್ಚಪ್ಪಯ್ಯನ ಮಠದ ಅನಿಲ್ ಗುರೂಜಿ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಶಾಸಕ ಜೆ ಟಿ ಪಾಟೀಲ ಈಡೇರಿಸಿಲ್ಲ ಎಂದು ಬೀಳಗಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವಿಧಾನ ಚುನಾವಣೆಯ ಪ್ರಚಾರಕ್ಕೆ ಬಂದಾಗ ಶಾಸಕ ಜೆ ಟಿ ಪಾಟೀಲ ರಿಗೆ ಪಟ್ಟಣದ ಆಶ್ರಯ್ ಕಾಲೋನಿ ಅಭಿವೃದ್ಧಿ,ಗುಡ್ಡದ ಮೇಲಿರುವ ಹುಚ್ಚಪ್ಪಯ್ಯನ ಮಠಕ್ಕೆ ರಸ್ತೆ ಹಾಗೂ ನೀರಿನ ವ್ಯವಸ್ಥೆಮಾಡಿ ಕೊಡುವಂತೆ ಭಕ್ತರ ಪರವಾಗಿ ಮನವಿ ಮಾಡಿಕೊಂಡಾಗ,ನನ್ನನ್ನು ಗೆಲ್ಲಿಸಿ ನಾನು ಗೆದ್ದು ಬಂದರೆ ಮೊದಲಿಗೆ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ್ದರು,