ಕಲಬುರಗಿ : ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಡೋಣಗಾಂವ್ ಗ್ರಾಮದಿಂದ ಯಾದಗಿರಿ ಜಿಲ್ಲೆ ಮೈಲಾಪುರಕ್ಕೆ ನೂರಾರು ಸಂಖ್ಯೆಯಲ್ಲಿ 10 ವರ್ಷದ ಪಾದಯಾತ್ರೆಗೆ ಹೊರಟಿದ್ದಾರೆ.. ಜನವರಿ 13 ರಂದು ಬೆಳಗ್ಗೆ 8 ಗಂಟೆಗೆ ಡೋಣಗಾಂವ್ ಗ್ರಾಮದ ಮಲ್ಲಯ್ಯ ದೇವಸ್ಥಾನದಿಂದ ಭಕ್ತರ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ.. ಇನ್ನೂ ಪಾದಯಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.. ಮತ್ತು ಪಾದಯಾತ್ರೆ ಮುಗಿಸಿ ಮರಳಿ ವಾಪಾಸು ಸ್ವ ಗ್ರಾಮಕ್ಕೆ ಬರಲು ವಾಹನ ವ್ಯವಸ್ಥೆ ಸಹ ಕಲ್ಪಿಸಲಾಗಿದೆ..