ವಿಜಯಪುರ: ಜಿಲ್ಲೆಯನ್ನು 371 ಜೆ ಕಲಂ ವ್ಯಾಪ್ತಿಗೆ ಸೇರ್ಪಡೆಗಾಗಿ ನಗರದಲ್ಲಿ ರೈತ ಭಾರತ ಪಕ್ಷದಿಂದ ಪ್ರತಿಭಟನೆ
ವಿಜಯಪುರ ಜಿಲ್ಲೆಯನ್ನು 371 ಜೆ ಕಲಂ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ನಗರದಲ್ಲಿ ರೈತ ಭಾರತ ಪಕ್ಷದಿಂದ ಪ್ರತಿಭಟನೆ ಮಾಡಿದರು. ಮಂಗಳವಾರ ಸಾಯಂಕಾಲ 4ಗಂಟೆ ಸುಮಾರಿಗೆ ನಗರದ ಬುದ್ಧ ವಿಹಾರದಿಂದ ತಾಂಗಗಳಲ್ಲಿ ಸಚಿವರು ಸಂಸದರು ಜನಪ್ರತಿನಿಧಿಗಳ ಭಾವಚಿತ್ರವಿಟ್ಟು ಮೆರವಣಿಗೆ ಮಾಡುವ ಮೂಲಕ ಪ್ರತಿಪಟಿಸಿದರು. ವಿಜಯಪುರ ಜಿಲ್ಲೆಯು ಆರ್ಥಿಕ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದೆ ಹೀಗಾಗಿ ಕೂಡಲೇ ಜನಪ್ರತಿನಿಧಿಗಳು ಕಾಳಜಿ ವಹಿಸಿ ವಿಜಯಪುರ ಜಿಲ್ಲೆಯನ್ನು 371ಜೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.