ರಾಯಚೂರು: ರಾಯಚೂರು : KUWJ ಚುನಾವಣೆ ಹಲವು ಪತ್ರಕರ್ತರಿಂದ ನಾಮಪತ್ರ ಸಲ್ಲಿಕೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಯಚೂರು ಜಿಲ್ಲಾ ಘಟಕದ 2025-28ರ ಅವಧಿಗೆ ನಡೆಯುವ ಪತ್ರಕರ್ತರ ಚುನಾವಣೆ ಹಿನ್ನೆಲೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ಇಂದು ಹಲವು ವರದಿಗಾರರು ನಾಮಪತ್ರ ಸಲ್ಲಿಸಿದರು. ಬಿಟಿವಿ ಜಿಲ್ಲಾವರದಿಗಾರ, ಚಂದಪ್ಪ ದೋರನಹಳ್ಳಿ, ಲಿಂಗಸುಗೂರಿನ ಶಿವರಾಜ್ ಕೆಂಭಾವಿ, ರಾಘವೇಂದ್ರ ಗುಮಾಸ್ತ, ಶರಣಪ್ಪ ಆನೆಹೊಸೂರ್ ಸೇರಿದಂತೆ ಹಲವರು ಗುರುವಾರ ಚುನಾವಣಾಧಿಕಾರಿ ಮಲ್ಲಣ್ಣ, ಉಪಚುನಾವಣಾ ಅಧಿಕಾರಿ ಸುರೇಶ ರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಗುರುನಾಥ್, ಬಸವರಾಜ್ ನಾಗಡದಿನ್ನಿ, ಸೇರಿದಂತೆ ಇನ್ನಿತರಿದ್ದರು.