ಕಲಬುರಗಿ: ಸೆ17 ಕ್ಕೆ ಆಳಂದ ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗಮನ: ನಗರದಲ್ಲಿ ಬಿಜೆಪಿ ಯುವ ಮುಖಂಡ ಹರ್ಷಾನಂದ ಗುತ್ತೇದಾರ್
ಕಲಬುರಗಿ : ಸೆ 17 ರಂದು ಆಳಂದ ಪಟ್ಟಣದಲ್ಲಿ ಬಿಜೆಪಿ ನೂತನ ಕಾರ್ಯಲಯ ಉದ್ಘಾಟನೆ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜೇಯೆಂದ್ರ ಹಾಗೂ ವಿಧಾನ ಪರಿಷತ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಆಗಮಿಸಲಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಗುತ್ತೇದಾರ ತಿಳಿಸಿದ್ದಾರೆ.. ಸೆ15 ರಂದು ಮಧ್ಯಾನ 12 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಅದೇ ದಿನ ಸಾಯಂಕಾಲ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯ ದಶಮಾನೋತ್ಸವ ಹಾಗೂ ಬೃಹತ ಹಿಂದೂ ಸಮಾವೇಶದಲ್ಲಿ ವಿಜಯೇಂದ್ರ ಭಾಗಿಯಾಗಲಿದ್ದಾರೆಂದು ಹರ್ಷಾನಂದ ಗುತ್ತೇದಾರ್ ಹೇಳಿದರು.