ಕಂಪ್ಲಿ: ದೇವಲಾಪುರ ಬಳಿ ಬೈಕ್ ಹಾಗೂ ಭತ್ತ ಕೊಯ್ಯುವ ಮಷನ್ ಹೊತ್ತ ಲಾರಿ ನಡುವೆ ಭೀಕರ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಮೃತ
Kampli, Ballari | Oct 30, 2025 ಕಂಪ್ಲಿ ತಾಲೂಕಿನ ಹಾಗೂ ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಲಾಪುರ ಗ್ರಾಮದ ಬಳಿ ಭತ್ತ ಕೊಯ್ಯುವ ಮಷಿನ್ ಹೊತ್ತ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಅ.30ಗುರುವಾರ ಬೆಳಿಗ್ಗೆ 10:30ರ ಸುಮಾರಿಗೆ ನಡೆದಿದೆ. ಬೈಕ್ ಸವಾರ ಸಾಲಿ ಉಮೇಶ ತಂದೆ ಸಾಲಿ ಬಸವರಾಜ ರಸ್ತೆ ಅಪಘಾತದಲ್ಲಿ ಮೃತ ಯುವಕ ಎಂದು ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.